
25th March 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮಾ.೨೪-ಮನುಷ್ಯ ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ ಸಜ್ಜನರ ಸಂಗ ಮಾಡಿ ಸತ್ಕರ್ಮಗಳಿಂದ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಳಿದರು.
ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಸ್ಥಳೀಯ ಹೇಮ ವೇಮನ ಸದ್ಬೋಧನ ಪೀಠ ನೀಲಪ್ಪ ಬಾಳಕ್ಕನವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ ೧೭೮ ನೆಯ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಸದ್ಬೋಧನೆ ನೀಡಿದರು.
ಮಹಾನುಭಾವರು, ಶರಣರು, ಸಂತರು, ಯೋಗಿಗಳು ತಮ್ಮ ಅಂತರAಗದ ಚಕ್ಷುವಿನಿಂದ ಪರಮಾತ್ಮನನ್ನು ಕಂಡವರು. ಹಾಗೆಯೇ ಮನುಷ್ಯ ತನ್ನ ಮನಸ್ಸನ್ನು ಸಚ್ಛವಾಗಿರಿಸಿಕೊಂಡು ನೀತಿವಂತನಾಗಿ ಬಾಳಿ ಪರೋಪಕಾರದ ಕಾರ್ಯಗಳನ್ನು ಗೈದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದ ಗುರೂಜಿ, ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ ಸಜ್ಜನರ ಸಂಗದಿAದ ಸತ್ಕರ್ಮಿಯಾಗಿ ಬಾಳಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ ಡಿ.ಪಿ.ಅಮಲಝರಿ, ಬದುಕಿನ ಅರ್ಥ ತಿಳಿದುಕೊಂಡವನಲ್ಲಿ ನೀತಿವಂತಿಕೆ ಇರುತ್ತದೆ. ಆ ದಿಸೆಯಲ್ಲಿ ಮನುಷ್ಯ ಸತ್ಸಂಗ, ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತನಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಂಜಯ ನಡುವಿನಮನಿ, ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದು ಮುಖ್ಯವಲ್ಲ, ಯಾವ ರೀತಿ ಬದುಕಿದ ಅನ್ನುವುದು ಮುಖ್ಯ. ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಬದುಕು, ಅವರು ನೀಡಿದ ಸಂದೇಶಗಳು ಎಲ್ಲರ ಬಾಳಿಗೂ ಬೆಳಕಾಗಿವೆ ಎಂದು ಹೇಳಿದರು.
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು.
ವೆಂಕಟೇಶ ಕೇರಿ, ಶಂಕರ ಯಡಹಳ್ಳಿ, ಹನಮಂತ ಬಾಳಕ್ಕನವರ, ಆರ್.ಎಚ್.ಕುಲಕರ್ಣಿ, ರವಿ ಬಾಳಕ್ಕನವರ, ಬಸವರಾಜ ರಡ್ಡೇರ, ಸದ್ಬೋಧನ ಪೀಠದ ಟಿ.ಎಚ್.ಸನ್ನಪ್ಪನವರ, ಮಾಲತೇಶ ಅಮಾತೆಪ್ಪನವರ ಇದ್ದರು. ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದವರು ವೇಮನ ವಚನ ಪಠಣ ಮಾಡಿದರು.
ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯ :ಶಾಸಕ ತುನ್ನೂರ